Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
'ಕಾಳಜಿಯುಕ್ತ ವರದಿಗಳು ಬಿಂಬಿತವಾಗಲಿ'
ರೈತರ ಹೊಲದಮಟ್ಟದಲ್ಲಿನ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಂತಹ, ಕಾಳಜಿಯುಕ್ತ ವರದಿಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಬಿಂಬಿತವಾಗಬೇಕಿದೆ ಎಂದು ಹಿರಿಯ ಬರಹಗಾರ, ಸಾವಯವ ಕೃಷಿಕ ಈರಯ್ಯ ಕಿಲ್ಲೇದಾರ ಹೇಳಿದ್ದಾರೆ. ಅವರು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಕೃಷಿ ತರಬೇತಿ ಹಾಗೂ ಸಂಶೋಧನಾ ವಿದ್ಯಾಲಯದಲ್ಲಿ ಫೆಬ್ರವರಿ 3, 2009ರಂದು ಏರ್ಪಟ್ಟ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಬೇರೆಬೇರೆ ಕಾರಣಗಳಿಂದಾಗಿ ಇಂದು ಒಕ್ಕಲುತನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ; ಅನೇಕ ಸಮಸ್ಯೆಗಳಿಂದಾಗಿ ಒಕ್ಕಲುತನ ದೊಡ್ಡ ಸವಾಲೆನಿಸಿದೆ; ಆದರೆ ಈ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ರೈತ ಸಮುದಾಯವನ್ನು ಸಜ್ಜುಗೊಳಿಸಬೇಕಿದ್ದು, ಇದರಲ್ಲಿ ಮಾಧ್ಯಮಗಳ ಪಾತ್ರ ಗುರುತರವಾದುದು ಎಂದು ಕಿಲ್ಲೇದಾರ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಈರಯ್ಯ ಕಿಲ್ಲೇದಾರ ಮಾತನಾಡುತ್ತಿರುವುದು. ಎಸ್.ಎಸ್. ಹಿರೇಮಠ, ಎಸ್.ಸಿ. ಮೆಟಗುಡ್, ಪೂರ್ಣಪ್ರಜ್ಞ ಬೇಳೂರು ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಕೃಷಿ ವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಸಿ. ಮೆಟಗುಡ್ ಮಾತನಾಡಿ, ಒಕ್ಕಲುತನದ ಬಗ್ಗೆ ರೈತರು ಹೆಮ್ಮೆ, ಅಭಿಮಾನಪಡಬೇಕು ಎಂದರು. ಸಾಧ್ಯವಾದಷ್ಟೂ ಆಧುನಿಕ ಪದ್ಧತಿಗಳನ್ನು ಅನುಸರಿಸಿದರೆ ಒಕ್ಕಲುತನವನ್ನು ಲಾಭದಾಯಕವಾಗಿ ಮಾಡುವುದು ಸಾಧ್ಯವಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ, ಬೆಳಿಗ್ಗೆ ಕೃಷಿ ವಿದ್ಯಾಲಯದ ಪ್ರಾಚಾರ್ಯ ಡಾ. ಆರ್. ಪರಮೇಶ್ವರಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ರೈತರಿಗೆ ಅಗತ್ಯಾಧಾರಿತ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೃಷಿ ವಿಸ್ತರಣೆ ಇಂದು ಹೆಚ್ಚು ಬಲಗೊಳ್ಳಬೇಕು ಎಂದರು. ರೈತರ ಅನುಶೋಧನೆಗಳ ಮೇಲೆ ಹೆಚ್ಚಿನ ಬೆಳಕುಚೆಲ್ಲುವುದು ಕೂಡ ಅಗತ್ಯವಾಗಿತ್ತು, ಈ ಬಗ್ಗೆ ಮಾಧ್ಯಮಗಳು ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಕೃಷಿ ಪತ್ರಿಕೆಗಳನ್ನು ವೀಕ್ಷಿಸುತ್ತಿರುವುದು
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಹಾಗೂ ಅಭಿವೃದ್ಧಿ ಬರಹಗಾರ ಶಿವರಾಂ ಪೈಲೂರು ಮಾತನಾಡಿ, ಕೃಷಿ-ಗ್ರಾಮೀಣ ರಂಗದಲ್ಲಿ ಮಡುಗಟ್ಟಿರುವ ಹತಾಶೆಯನ್ನು ತಿಳಿಗೊಳಿಸುವ ಕೆಲಸ ಆಗಬೇಕಿದ್ದು, ಈ ದಿಸೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದರು. ರೈತರಲ್ಲಿ ಹೊಸ ಭರವಸೆಗಳನ್ನು ಮೂಡಿಸುವುದು ಸಾಧ್ಯವಾದರೆ ಮಾತ್ರ ಹತಾಶೆ ತಿಳಿಯಾಗುತ್ತದೆ; ಭರವಸೆಗಳನ್ನು ಮೂಡಿಸುವ ಸಲುವಾಗಿ ಸೂಕ್ತ ಮಾದರಿಗಳನ್ನು ಅವರ ಮುಂದಿಡಬೇಕು; ಆದರೆ ಎಲ್ಲಿಯದ್ದೋ ಮಾದರಿಗಳು, ಸುಲಭಸಾಧ್ಯವಲ್ಲದ ಮಾದರಿಗಳು ಅವರ ಮನಸ್ಸು ಗೆಲ್ಲುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತಪರ ಕೃಷಿ ಪತ್ರಿಕೋದ್ಯಮದ ಬೆಳವಣಿಗೆಗಾಗಿ ತಮ್ಮ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೀಗ ಕಾರ್ಯಾಗಾರ ಸರಣಿ ಆಯೋಜಿಸಿದೆ ಎಂದರು. ಬರಹಗಾರ ಪೂರ್ಣಪ್ರಜ್ಞ ಬೇಳೂರು, ಕೃಷಿ ವಿದ್ಯಾಲಯದ ಉಪ ಪ್ರಾಚಾರ್ಯ ಎಸ್.ಎಸ್. ಹಿರೇಮಠ, ಉಪನ್ಯಾಸಕರಾದ ಸುರೇಶ ಗಟ್ಟನಟ್ಟಿ, ಮಹೇಶ ಮಠದ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media