Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಭಾಷಾಜ್ಞಾನ ಹೆಚ್ಚಿಸಿಕೊಳ್ಳುವಂತೆ ಅಡ್ಡೂರು ಸಲಹೆ
ಕೃಷಿ ಮಾಧ್ಯಮ ಕೇಂದ್ರ ಹುಬ್ಬಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಅಂಡ್ ರಿಸರ್ಚ್ ಸಹಭಾಗಿತ್ವದಲ್ಲಿ ಡಿಸೆಂಬರ್ 12, 2008ರಂದು ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಕಾರ್ಯಾಗಾರ ಹಮ್ಮಿಕೊಂಡಿತ್ತು. ಐಎಂಸಿಆರ್ ಸಭಾಂಗಣದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕ್ರಮ ನಿರ್ದೇಶಕ ನವೀನ್ ಝಾ ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ,ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ವೇಗವರ್ಧಕವಾಗಿ ಕೆಲಸಮಾಡಬೇಕಿದ್ದು, ಈ ನಿಟ್ಟಿನಲ್ಲಿ ಯುವ ಬರಹಗಾರರು ಸೂಕ್ತ ತರಬೇತಿ ಪಡೆಯುವುದು ಅಗತ್ಯ ಎಂದರು.
ನವೀನ್ ಝಾ ಅವರಿಂದ ಉದ್ಘಾಟನಾ ಭಾಷಣ

ಐಬಿಎಂಆರ್ ಬ್ಯುಸಿನೆಸ್ ಮೆನೇಜ್‌ಮೆಂಟ್ ಅಂಡ್ ರಿಸರ್ಚ್ ಡೀನ್ ಪ್ರೊ. ಪಿ.ಎನ್. ಖಟಾವಕರ, ಐಎಂಸಿಆರ್ ಪ್ರಾಚಾರ್ಯರಾದ ಡಾ. ನಯನಾ ಗಂಗಾಧರ, ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತ, ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಮತ್ತಿತರ ಗಣ್ಯರು ಸಮಾರಂಭದಲ್ಲಿಪಾಲ್ಗೊಂಡಿದ್ದರು

ಶಿಬಿರಾರ್ಥಿಗಳು
ನಂತರ ನಡೆದ ಕಾರ್ಯಾಗಾರದಲ್ಲಿ ಬ್ಯಾಂಕಿಂಗ್ ತಜ್ಞ, ಅಭಿವೃದ್ಧಿ ಬರಹಗಾರ ಅಡ್ಡೂರು ಕೃಷ್ಣರಾವ್ ಹಾಗೂ ಶಿವರಾಂ ಪೈಲೂರು ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಕ್ಷೇತ್ರಭೇಟಿಯ ಕ್ರಮ, ಬರವಣಿಗೆ ತಂತ್ರಗಾರಿಕೆ, ಬದ್ಧತೆ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನೀಡಿದರು. 'ಕನಸುಗಳನ್ನು ಮಾರಿಕೊಳ್ಳಬೇಡಿ' ಎಂಬ ಕಿವಿಮಾತಿನೊಂದಿಗೆ ಮಾತು ಆರಂಭಿಸಿದ ಅಡ್ಡೂರು, ರೈತರ ಹೊಲದ ಮಟ್ಟದಲ್ಲಿನ ವಾಸ್ತವ ಚಿತ್ರಣವನ್ನು ಗ್ರಹಿಸಿಕೊಂಡು ಬರೆಯಬೇಕು;ಜತೆಗೆ ವಿಷಯದ ಆಳಕ್ಕಿಳಿಯುವ ಕಾಳಜಿ, ಪರಿಶ್ರಮ ಕೂಡ ಇರಬೇಕು ಎಂದರು.
ವಿಷಯವನ್ನು ಸರಳವಾಗಿ, ಆಸಕ್ತಿಯುತವಾಗಿ ಸಾದರಪಡಿಸುವುದು ಮುಖ್ಯ ಎಂದ ಅಡ್ಡೂರು, ಭಾಷಾಜ್ಞಾನ ಹೆಚ್ಚಿಸಿಕೊಳ್ಳುವಂತೆ ಹಾಗೂ ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಸಂಜೆ ಏರ್ಪಟ್ಟ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
 
ಶಿಬಿರಾರ್ಥಿಗಳ ಅನಿಸಿಕೆ

ಕಾರ್ಯಾಗಾರ ತುಂಬಾ ಪರಿಣಾಮಕಾರಿಯಾಗಿತ್ತು. ನುಡಿಚಿತ್ರಗಳನ್ನು ಹೇಗೆ
ಬರೆಯಬೇಕೆಂಬುದು ತಿಳಿಯಿತು. - ಶಿಲ್ಪಾ ಎಸ್. ಹಿರೇಮಠ

ಕೃಷಿ, ಗ್ರಾಮೀಣ ಅಭಿವೃದ್ಧಿ ವಿಚಾರಗಳ ಬಗ್ಗೆ ಲೇಖನ ಬರೆಯುವುದಕ್ಕೆ ಕಾರ್ಯಾಗಾರ
ಪ್ರೇರಣೆ ನೀಡಿತು. - ಶ್ರೀದೇವಿ ಎಸ್. ಬುರ್ಲಿ

ಕಾರ್ಯಾಗಾರದ ಸಂದರ್ಭದಲ್ಲಿ ನೀಡಿರುವ ಮಾಹಿತಿ ಸಂಪುಟ ಅನೇಕ ಉಪಯುಕ್ತ
ವಿಚಾರಗಳನ್ನು ಒಳಗೊಂಡಿದೆ.- ಅಕ್ಷತಾ ಎಸ್. ದೀಕ್ಷಿತ್

 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media