Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ

(ಅಂಚೆ ತೆರಪಿನ ಶಿಕ್ಷಣ; ನವೆಂಬರ್-ಅಕ್ಟೋಬರ್)

ಇದು ಕೃಷಿ ಮಾಧ್ಯಮ ಕೇಂದ್ರ ನಡೆಸುತ್ತಿರುವ ಒಂದು ವರ್ಷ ಅವಧಿಯ ಅಂಚೆ ತೆರಪಿನ ತರಬೇತಿ (ಕರೆಸ್ಪಾಂಡೆನ್ಸ್ ಕೋರ್ಸ್). 2003ರಲ್ಲಿ ಆರಂಭ.

ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮವನ್ನು ಇನ್ನಷ್ಟು ಬಲಗೊಳಿಸಬೇಕು; ಈ ಮೂಲಕ ರೈತರ ನೋವು-ನಲಿವುಗಳು ಹಾಗೂ ಗ್ರಾಮೀಣ ಆಗುಹೋಗುಗಳ ಮೇಲೆ ಸಮರ್ಪಕವಾಗಿ ಬೆಳಕು ಚೆಲ್ಲಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಈ ತರಬೇತಿ ನಡೆಸುತ್ತಿದೆ. ಆಸಕ್ತರಿಗೆ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಸೂತ್ರಗಳನ್ನು ತಿಳಿಸುವುದರ ಜೊತೆಗೆ ಅವರಲ್ಲಿ ಕೃಷಿಕಪರ ತುಡಿತಗಳನ್ನೂ ಮೂಡಿಸಬೇಕೆನ್ನುವುದು ಕೇಂದ್ರದ ಉದ್ದೇಶ. ತರಬೇತಿಯ ಕೊನೆಗೆ ಅವರು ಸಮರ್ಥ ಕೃಷಿ-ಗ್ರಾಮೀಣ ಲೇಖಕ/ಲೇಖಕಿಯಾಗಬೇಕು ಎಂಬ ಆಶಯ. ಪರಿಣಾಮಕಾರಿ ತರಬೇತಿಯ ದೃಷ್ಟಿಯಿಂದ ಕೇವಲ 25ರಿಂದ 30 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಸೀಮಿತ.

ಕೃಷಿರಂಗದಲ್ಲಿನ ಹೊಸಹೊಸ ಬೆಳವಣಿಗೆಗಳು ರೈತರಿಗೆ ಲಾಭ ತಂದುಕೊಟ್ಟದ್ದಕ್ಕಿಂತ ನಿರಾಸೆ ಉಂಟುಮಾಡಿದ್ದೇ ಹೆಚ್ಚು. ಮಾಹಿತಿಗಳು, ಉತ್ಪ್ರೇಕ್ಷಿತ ಚಿತ್ರಣಗಳು, ಅರೆಬೆಂದ ಬರಹಗಳು ರೈತರನ್ನು ಹಾದಿತಪ್ಪಿಸಿ ಅವರು ಇನ್ನಷ್ಟು ಹತಾಶರಾಗುವಂತೆ ಮಾಡುತ್ತಿರುವುದನ್ನೂ ಕಾಣುತ್ತಿದ್ದೇವೆ. ಆದರೆ ಕೃಷಿ-ಗ್ರಾಮೀಣ ರಂಗದ ಕುರಿತು ನಿಜವಾದ ಕಾಳಜಿ ಹೊಂದಿರುವ ಲೇಖಕರಿಂದ ರೈತರ ಅಗತ್ಯಾಧಾರಿತ ಸಂವಹನಕ್ಕೆ ಹೊಸ ಚಾಲನೆ ಸಿಗಬಹುದೆಂಬ ನಿರೀಕ್ಷೆ ಕೇಂದ್ರದ್ದು. ಈ ತರಬೇತಿಯ ಮೂಲಕ ಇಂತಹ ಬರಹಗಾರರನ್ನು ರೂಪಿಸಲು ಕೇಂದ್ರ ಪ್ರಯತ್ನಿಸುತ್ತಿದೆ.

ಕೃಷಿಕರು, ಕೃಷಿ-ಗ್ರಾಮೀಣ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಪತ್ರಿಕೋದ್ಯಮ ಹಾಗೂ ಕೃಷಿ ವಿಜ್ಞಾನ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು, ಪತ್ರಕರ್ತರು ಮೊದಲಾದವರಿಗೆ ಈ ತರಬೇತಿ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಈ ಹಿಂದೆ ತರಬೇತಿ ಪಡೆದವರಲ್ಲಿ ಇವರೆಲ್ಲರೂ ಸೇರಿದ್ದಾರೆ. ಸಾಕಷ್ಟು ಕೃಷಿ ಅಧಿಕಾರಿಗಳು ಕೂಡ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರದ ಜತೆಗಿದ್ದಾರೆ.

ತರಬೇತಿಯ ಆರಂಭದಲ್ಲಿ ರಾಜ್ಯದ ಯಾವುದಾದರೊಂದು ಸ್ಥಳದಲ್ಲಿ ನಾಲ್ಕು ದಿನಗಳ ಪ್ರಾಥಮಿಕ ಶಿಬಿರ ಇರುತ್ತದೆ. ಅದರಲ್ಲಿ ಎಲ್ಲ ಅಭ್ಯರ್ಥಿಗಳೂ ತಪ್ಪದೇ ಭಾಗವಹಿಸಬೇಕು. ಆ ಸಂದರ್ಭದಲ್ಲಿ ತಜ್ಞರು ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಕುರಿತು ಸವಿವರವಾಗಿ ತಿಳಿಸಿಕೊಡುತ್ತಾರೆ. ಲೇಖನ ಬರೆಯುವ ಬಗ್ಗೆ ಪ್ರಾಯೋಗಿಕ ತರಬೇತಿಯೂ ಇರುತ್ತದೆ. ಆ ಬಳಿಕ ಪ್ರತಿ ತಿಂಗಳು ಅಭ್ಯರ್ಥಿಗಳು ಕನಿಷ್ಠ ಒಂದು ಲೇಖನವನ್ನು ಬರೆದು ಕೇಂದ್ರಕ್ಕೆ ಕಳುಹಿಸಬೇಕು. ಅದನ್ನು ಪರಿಶೀಲಿಸಿ ಸೂಕ್ತ ಸಲಹೆಗಳೊಂದಿಗೆ ವಾಪಸ್ ಮಾಡಲಾಗುವುದು.

ಇಡೀ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೂ ವಿವಿಧ ಮಾಧ್ಯಮಗಳಿಗೂ ನಡುವೆ ಸಂಪರ್ಕ ಕಲ್ಪಿಸಲು ಕೇಂದ್ರ ಪ್ರಯತ್ನಿಸುತ್ತದೆ. ಅಭ್ಯರ್ಥಿಗಳು ಯಾವುದೇ ಸಂದರ್ಭದಲ್ಲಿ ಕೇಂದ್ರಕ್ಕೆ ಭೇಟಿನೀಡಿ ಅಗತ್ಯ ಮಾರ್ಗದರ್ಶನ ಪಡೆಯಬಹುದು. ಕೇಂದ್ರದ ಗ್ರಂಥಾಲಯವನ್ನೂ ಬಳಸಿಕೊಳ್ಳಬಹುದು. ಪ್ರತಿ ಅಭ್ಯರ್ಥಿಗೂ ವೈಯಕ್ತಿಕ ಗಮನ ನೀಡುವುದು ತರಬೇತಿಯ ವಿಶೇಷ.

ತರಬೇತಿಯ ಕೊನೆಯಲ್ಲಿ ಯಾವುದೇ ಪರೀಕ್ಷೆಗಳಿಲ್ಲ. ಅದರ ಬದಲು ಅಭ್ಯರ್ಥಿಗಳ ಬರವಣಿಗೆಯ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು. ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಲೇಖನಗಳಿಗೆ ಹೆಚ್ಚಿನ ಅಂಕಗಳನ್ನು ನಿಗದಿಮಾಡಲಾಗಿದೆ. ಯಶಸ್ವೀ ಅಭ್ಯರ್ಥಿಗಳನ್ನು 'ಕಾಮ್ ಫೆಲೋ'ಗಳೆಂದು ಪರಿಗಣಿಸಲಾಗುವುದು. ಒಟ್ಟಾರೆಯಾಗಿ ಅತ್ಯುತ್ತಮ ಸಾಧನೆ ಮಾಡುವ ಅಭ್ಯರ್ಥಿಗೆ ವಿಶೇಷ ಪುರಸ್ಕಾರ ನೀಡಲಾಗುವುದು. ಕಾಮ್ ಫೆಲೋಗಳು ನಂತರದ ದಿನಗಳಲ್ಲಿಯೂ ಕೇಂದ್ರದಿಂದ ಅಗತ್ಯ ಸಲಹೆ, ಮಾರ್ಗದರ್ಶನ ಪಡೆಯಬಹುದು.

ಇದುವರೆಗೆ ಗದಗ ಜಿಲ್ಲೆ ಹುಲಕೋಟಿಯ ಕೆ.ಹೆಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ 'ಶ್ರೀರಂಗ'-ಕಟ್ಟದಮಜಲು, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಸೂರಶೆಟ್ಟಿಕೊಪ್ಪದ 'ಗ್ರಾಮಚೇತನ', ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕು ಹೊಸಹಳ್ಳಿಯ ಗಿರಿಜನ ಶಿಕ್ಷಣ ಕೇಂದ್ರ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳಿಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ಪ್ರಾಥಮಿಕ ಶಿಬಿರಗಳನ್ನು ಆಯೋಜಿಸಲಾಗಿದೆ.ಇದುವರೆಗೆ ತರಬೇತಿ ಪಡೆದವರ ಸಂಖ್ಯೆ 200. ಅವರಲ್ಲಿ 80 ಮಂದಿ ಕಾಮ್ ಫೆಲೋ ಗೌರವ ಪಡೆದಿದ್ದಾರೆ.

ಕಾಮ್ ಫೆಲೋಗಳ ವಿವರ ಕಾಮ್ ಫೆಲೋಗಳ ಅನಿಸಿಕೆ
 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media