Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಮಿಶ್ರಕೃಷಿ-ಮೌಲ್ಯವರ್ಧನೆ-ನೇರ ಮಾರುಕಟ್ಟೆ : ಎಸ್.ಎಂ. ಪಾಟೀಲರ ಮಾದರಿ
ಕೃಷಿ ಮಾಧ್ಯಮ ಕೇಂದ್ರದ ಹೊಸ ಪುಸ್ತಕ ಪ್ರಕಟಗೊಂಡಿದೆ. 'ಮಿಶ್ರಕೃಷಿ-ಮೌಲ್ಯವರ್ಧನೆ-ನೇರ ಮಾರುಕಟ್ಟೆ: ಎಸ್.ಎಂ. ಪಾಟೀಲರ ಮಾದರಿ' ಶೀರ್ಷಿಕೆಯ ಈ ಪುಸ್ತಕವನ್ನು ಕಾಮ್ ಫೆಲೋ ಲೀಲಾ ಕೌಜಗೇರಿ ಬರೆದಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿಯ ಎಸ್.ಎಂ. ಪಾಟೀಲರು ತಮ್ಮ ಬದುಕಿನ 38 ವರ್ಷಗಳನ್ನು ಕಡತ-ಕಾಗದಪತ್ರ-ದಾಖಲೆಗಳ ನಡುವೆ ಕಳೆದವರು. 10 ವರ್ಷಗಳ ಹಿಂದೆ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದಾಗ ಅವರ ಮನದಲ್ಲಿ ಒಂದೇ ಯೋಚನೆ: `ಆದಷ್ಟು ಬೇಗನೆ ಒಕ್ಕಲುತನಕ್ಕಿಳಿಯಬೇಕು.' ಅವರು ತಡಮಾಡಲಿಲ್ಲ. ಹಾಗಂತ ದುಡುಕಲೂ ಇಲ್ಲ. ಹತ್ತಾರು ಕಡೆ ಓಡಾಡಿ ಸಾವಯವ ಕೃಷಿಕರ ಪ್ರಯೋಗಗಳನ್ನು ಕೂಲಂಕಷ ನೋಡಿದರು; ಅವರ ಅನುಭವಗಳಿಗೆ ಕಿವಿಗೊಟ್ಟರು. ಅಷ್ಟರಲ್ಲಿ ಮುಂದಿನ ಹಾದಿ ಸ್ಪಷ್ಟವಾಗಿತ್ತು. ನಾನಾ ಬೆಳೆಗಳು, ಪ್ರತಿಯೊಂದರಿಂದ ಬಗೆಬಗೆಯ ಮೌಲ್ಯವರ್ಧಿತ ಉತ್ಪನ್ನ, ಸದಾ ಹೊಸಹೊಸ ಪ್ರಯೋಗ, ನೇರ ಮಾರುಕಟ್ಟೆ, ಸಂಘಟನೆಯ ಮೂಲಕ ಸಾವಯವ ಚಳವಳಿಯ ಬಲವರ್ಧನೆ - ಇವೆಲ್ಲವುಗಳ ನಡುವೆ ಪಾಟೀಲರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರ ಮನಸ್ಸು-ಕೃಷಿ-ಬದುಕು ಎಲ್ಲವೂ ಸಾವಯವ. ಆದ್ದರಿಂದಲೇ ಒಕ್ಕಲುತನದಲ್ಲಿ ಅವರಿಗೆ ಖುಷಿ, ನೆಮ್ಮದಿ.

ನೈಸರ್ಗಿಕ ಕುಂಕುಮ, ಅರಿಷಿಣ ಪುಡಿ, ಕ್ರಿಯಾಭಸ್ಮ ಗಟ್ಟಿ, ಚಿಕ್ಕು ಜಾಮ್, ಚಿಕ್ಕು ಮಸಾಲ ಅಡಿಕೆ, ಚಿಕ್ಕು ಒಣ ಹಣ್ಣು, ಚಿಕ್ಕು ಉಪ್ಪಿನಕಾಯಿ, ಮಾಕಂದಿ ಬೇರು ಉಪ್ಪಿನಕಾಯಿ, ಚಿಕ್ಕು ಚಾಕಲೇಟ್, ಚಿಕ್ಕು ಶಕ್ತಿವರ್ಧಕ ಚೂರ್ಣ, ಸುಗಂಧವರ್ಧಕ ಸೊಳ್ಳೆಬತ್ತಿ, ಗೋಮಯಯುಕ್ತ ಸಾಬೂನು, ನೇತ್ರರಕ್ಷಕ, ದಂತಮಂಜನ, ಪಾಚಕ ಚೂರ್ಣ, ಕಷಾಯ ಚೂರ್ಣ, ಕರಿಬೇವು ಸೊಪ್ಪಿನ ಚೂರ್ಣ, ಗೋಮೂತ್ರಯುಕ್ತ ಫಿನೈಲ್, ಭಟ್ಟಿ ಇಳಿಸಿದ ಗೋಮೂತ್ರ, ಗೋಧಿ ಬೀಜಾಂಕುರ ಚೂರ್ಣ, ಜವಾರಿ ಟೊಮೆಟೋದ ಸಾಸ್, ರೆಡಿಮೇಡ್ ಶರಬತ್ತು, ಮುಖಕ್ಕೆ ಹಚ್ಚುವ ಪೌಡರ್, ಸಾರಿನಪುಡಿ. ಶೇಂಗಾ-ಗುರೆಳ್ಳು-ಅಗಸಿ ಚಟ್ನಿ, ಕಾಕಡೆ (ಗೋಧಿ ಹಪ್ಪಳ) - ಹೀಗೆ ಪಾಟೀಲ್ ಕುಟುಂಬದ ಮೌಲ್ಯವರ್ಧನೆಯ ಉತ್ಪನ್ನಗಳು ಹಲವು. ಎಲ್ಲ ಉತ್ಪನ್ನಗಳಿಗೂ ಸಾವಯವ ದೃಢೀಕರಣ ಪ್ರಮಾಣಪತ್ರ ಸಿಕ್ಕಿದೆ.

ಪಾಟೀಲರು ಸಾವಯವ ಚಳವಳಿಯ ಮುಂಚೂಣಿಯಲ್ಲೂ ಇದ್ದಾರೆ. ಅವರು 2003ರಲ್ಲಿ ಅಥಣಿ ತಾಲೂಕು ಸಾವಯವ ಕೃಷಿಕರ ಸಂಘ ಸ್ಥಾಪಿಸಿದರು. ಅಶೋಕ್ ಪಾಟೀಲ್ ಅಧ್ಯಕ್ಷರು. ಎಸ್.ಎಂ. ಪಾಟೀಲ್ ಗೌರವ ಕಾರ್ಯದರ್ಶಿ. ಮನೆಯಿಂದಲೇ ಕಾರ್ಯ ನಿರ್ವಹಣೆ. ಆರಂಭವಾದಾಗ ಇದ್ದ ಸದಸ್ಯರು ಕೇವಲ ಏಳು ಮಂದಿ. ಈಗ 183 ಮಂದಿ ಸದಸ್ಯರು. ಅವರಲ್ಲಿ 80 ರೈತರು ಪೂರ್ಣಪ್ರಮಾಣದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಕೃಷಿ ಮಾಧ್ಯಮ ಕೇಂದ್ರ ಈ ಮೊದಲು `ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ, `ಗುಡ್ದದ ಮೇಲಿನ ಏಕವ್ಯಕ್ತಿ ಸೈನ್ಯ ಹಾಗೂ `ಸಾವಯವದ ಹಾದಿ ಪುಸ್ತಕಗಳ ಮೂಲಕ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿದಿದೆ. ಈ ಸರಣಿಯಲ್ಲಿ ಇದು ನಾಲ್ಕನೇ ಪುಸ್ತಕ

ಪುಸ್ತಕದ. ಬೆಲೆ ರೂ.20 (ಅಂಚೆ ವೆಚ್ಚ ಪ್ರತ್ಯೇಕ).
ಪ್ರತಿಗಳಿಗಾಗಿ ಕೇಂದ್ರವನ್ನು ಸಂಪರ್ಕಿಸಿ.

 
ಪುಸ್ತಕ ಡೌನ್‌ಲೋಡ್ ಮಾಡಿ
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media