Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಬೀಜೋತ್ಪಾದನೆ: ರಾಣೆಬೆನ್ನೂರಿನ ರೈತರ ಅನುಭವ

ಕಂಪೆನಿ ಪ್ರೇರಿತ ಬೀಜೋತ್ಪಾದನೆ ನಮ್ಮ ಜೀವವೈವಿಧ್ಯಕ್ಕೆ ಸಂಚಕಾರ ತಂದೊಡ್ಡುವುದರ ಜೊತೆಗೆ ನಮ್ಮ ರೈತರ ಬೆಳೆಯುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಪರಿಸರಕ್ಕೆ ಪೂರಕವಲ್ಲದ, ರೈತರ ಅವಲಂಬನೆಯನ್ನು ಹೆಚ್ಚಿಸುವ ಪದ್ಧತಿಗಳು ರೈತರಿಗೆ ಮಾರಕ ಎಂಬ ನಿಲುವಿನೊಂದಿಗೆ ಹಲವು ಸಂಘಟನೆಗಳು ಆಂದೋಲನ ನಡೆಸುತ್ತಿವೆ. ಆ ಪೈಕಿ ಆಂಧ್ರ ಪ್ರದೇಶದ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ (ಡಿಡಿಎಸ್) ಮುಂಚೂಣಿಯಲ್ಲಿದೆ.

2008ರಲ್ಲಿ ಡಿಡಿಎಸ್ ಕರ್ನಾಟಕದಲ್ಲಿ ಕೃಷಿ ಮಾಧ್ಯಮ ಕೇಂದ್ರದ ಜೊತೆಗೂಡಿ ಬೀಜೋತ್ಪಾದನೆಯ ವಸ್ತುಸ್ಥಿತಿ ಅಧ್ಯಯನ ಮಾಡಿತು. ರಾಜ್ಯದ ಬೀಜೋತ್ಪಾದನೆಯ ತೊಟ್ಟಿಲು ಹಾವೇರಿ. ಕಳೆದ ಮೂರು ದಶಕಗಳಿಂದ ಜಿಲ್ಲೆಯ ರಾಣೆಬೆನ್ನೂರು ಬೀಜ ಕಂಪೆನಿಗಳ ಬೀಡಾಗಿದೆ. ಬೀಜೋತ್ಪಾದನೆ ನೀಡುವ ನಿಶ್ಚಿತ ಆದಾಯದ ಭರವಸೆಗೆ ಮಾರುಹೋದ ಹಲವಾರು ರೈತರು ಜೀವನಾಧಾರಿತ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು 'ಒಪ್ಪಂದ ಕೃಷಿ' ನಡೆಸುತ್ತಿದ್ದಾರೆ. ಮಿತಿಮೀರಿದ ನೀರಾವರಿ, ವಿಪರೀತ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಕಂಪೆನಿಗಳ ಒತ್ತಡದಿಂದಾಗಿ ರೈತರೂ ಹೈರಾಣಾಗಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾಗಿ, ಸಾಲದ ಮೊತ್ತ ಆದಾಯಕ್ಕಿಂತ ಹೆಚ್ಚಾಗಿದೆ ಎಂಬುದು ಇಲ್ಲಿನ ಸಾಮಾನ್ಯ ರೈತರ ಅಭಿಪ್ರಾಯ.

ಹಾವೇರಿ ಜಿಲ್ಲೆಯಲ್ಲಿ ಮಣ್ಣಿನ ಸತ್ವ ಕಡಿಮೆಯಾಗುತ್ತಿರುವ ಸುಳಿವು ಸಿಕ್ಕ ಬೀಜ ಕಂಪೆನಿಗಳು ಇದೀಗ ತಮ್ಮ ಚಟುವಟಿಕೆ ಕಡಿಮೆ ಮಾಡಿದ್ದು, ಬೇರೆ ಜಿಲ್ಲೆಗಳತ್ತ ಸಾಗುತ್ತಿವೆ. ಬೀಜೋತ್ಪಾದನೆಯ ಚಟುವಟಿಕೆಗಳಿಂದ ಹಾವೇರಿಯ ರೈತರು, ಮಣ್ಣು ಹಾಗೂ ಒಟ್ಟಾರೆ ಪರಿಸರಕ್ಕೆ ಬಹಳಷ್ಟು ಹಾನಿಯಾಗಿದೆ. ಅಲ್ಲಿನ ಜನ, ಜಾನುವಾರು, ಸಾಮಾಜಿಕ ತಳಹದಿಯ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಿದೆ.

ಅಧ್ಯಯನದಲ್ಲಿ ಸಹಕರಿಸಿದವರು:

ಪೂರ್ಣಪ್ರಜ್ಞ ಬೇಳೂರು, ಸಾಗರ
ಹರ್ಷವರ್ಧನ ಶೀಲವಂತ, ಧಾರವಾಡ
ಜಿ. ಗಣಪತಿ ಭಟ್, ರಾಮನಗರ


ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media