Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಉತ್ತಮ ಫಲಿತಾಂಶ

ಈ ಬಾರಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ನೋಂದಾಯಿಸಿದ್ದ 22 ಅಭ್ಯರ್ಥಿಗಳ ಪೈಕಿ 16 ಮಂದಿ ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿದ್ದಾರೆ. ಶೇಕಡಾವಾರು ಹೋಲಿಸಿದರೆ ಬಹುಶಃ ಕಳೆದ ಒಂಭತ್ತು ವರ್ಷಗಳಲ್ಲಿ ದೊರೆತ ಅತ್ಯುತ್ತಮ ಫಲಿತಾಂಶ ಇದಾಗಿದೆ. ತರಬೇತಿಯಲ್ಲಿ ಉತ್ತೀರ್ಣರಾದ ಅಷ್ಟೂ ಮಂದಿ ಕಳೆದ ಒಂದು ವರ್ಷ ಪೂರ್ಣಮನಸ್ಸಿನಿಂದ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವರ್ಷದ ‘ಅತ್ಯುತ್ತಮ ಅಭ್ಯರ್ಥಿ’ ಹಿರಿಮೆಗೆ ಡಾ. ಗಣೇಶ ಹೆಗಡೆ ಪಾತ್ರರಾಗಿದ್ದಾರೆ. ಅವರು ಕಳೆದ ಒಂದು ವರ್ಷದಲ್ಲಿ ಬರೆದ 23 ಲೇಖನಗಳು ಹಾಗೂ ಹತ್ತಾರು ಸಂಪಾದಕರಿಗೆ ಪತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೇಖನ, ನುಡಿಚಿತ್ರ, ಸಂದರ್ಶನ, ವಿಶ್ಲೇಷಣಾತ್ಮಕ ಬರಹ ಹೀಗೆ ಬರವಣಿಗೆಯ ವಿವಿಧ ಪ್ರಕಾರಗಳಲ್ಲಿ ಅವರು ಪರಿಶ್ರಮಪಟ್ಟಿದ್ದಾರೆ. ಇವೆಲ್ಲದರ ಜೊತೆಗೆ ಅವರು ಕೃಷಿ-ಹೈನುಗಾರಿಕೆ-ಗ್ರಾಮೀಣಾಭಿವೃದ್ಧಿ ಸಂಬಂಧಿ ಲೇಖನಗಳ ಸಕ್ರಿಯ ಓದುಗರೂ ಆಗಿದ್ದರು. ಈ ಮಧ್ಯೆ ಸಾವಯವ-ಸ್ವಾವಲಂಬನೆ-ಮೌಲ್ಯವರ್ಧನೆ-ನೇರ ಮಾರುಕಟ್ಟೆ ಸಾಧಕ ಬೆಂಗಳಿ ವೆಂಕಟೇಶ್ ಅವರ ಅನುಭವ ಕಥನವನ್ನು ಡಾ. ಹೆಗಡೆ ದಾಖಲಿಸಿದ್ದು ಅದು ಶೀಘ್ರ ಪುಸ್ತಕರೂಪದಲ್ಲಿ ಪ್ರಕಟವಾಗಲಿದೆ. ಇನ್ನೂ ಕೆಲ ಅಭ್ಯರ್ಥಿಗಳ ಲೇಖನಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹಾಗೆಯೇ ಇವರ ಲೇಖನವನ್ನಾಧರಿಸಿ ವಿವಿಧ ಮಾಧ್ಯಮಗಳು ಕಾರ್ಯಕ್ರಮವನ್ನೂ ರೂಪಿಸಿವೆ. ತಮ್ಮ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಡಾ. ನಾಗರಾಜ್ ಒಳಪುಟದಲ್ಲಿ ದಾಖಲಿಸಿದ್ದಾರೆ. ನೂತನ ಕಾಮ್ ಫೆಲೋಗಳಿಗೆ ಅಭಿನಂದನೆಗಳು. ಇದರೊಂದಿಗೆ ಇದುವರೆಗಿನ ಒಟ್ಟು ಫೆಲೋಗಳ ಸಂಖ್ಯೆ 105 ತಲುಪಿದೆ.

ಕಳೆದ ಸಂಚಿಕೆಯಲ್ಲಿ ತಿಳಿಸಿರುವಂತೆ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಯನ್ನು ಒಂದೆರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಚುರುಕಾಗಿರುವ ಕಾಮ್ ಫೆಲೋಗಳ ಬರವಣಿಗೆಯ ಸುಧಾರಣೆಗೆ ಪ್ರಯತ್ನಿಸುವುದರ ಜೊತೆಗೆ ಬರವಣಿಗೆಯಿಂದ ವಿಮುಖರಾಗಿರುವ ಕೆಲವರನ್ನು ಮತ್ತೆ ಪತ್ರಿಕೋದ್ಯಮದತ್ತ ಪ್ರೇರೇಪಿಸಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯವೆನಿಸಿದರೆ ಹಾಗೂ ಕಾಮ್ ಫೆಲೋಗಳು ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಿದ್ದರೆ ಗಾಜನೂರು ಕಾರ್ಯಕ್ರಮದ ಮಾದರಿಯಲ್ಲಿ ಕೆಲವೆಡೆ ಪುನರ್ಮನನ ಶಿಬಿರ ಹಮ್ಮಿಕೊಳ್ಳಬಹುದು. ಅಂಥದ್ದೊಂದು ಶಿಬಿರವನ್ನು ರಾಮನಗರ-ಕನಕಪುರ ಪ್ರದೇಶದಲ್ಲಿ ಆಯೋಜಿಸಲು ಕಾಮ್ ಫೆಲೋಗಳಾದ ಗಣಪತಿ ಭಟ್ ಹಾರೋಹಳ್ಳಿ ಹಾಗೂ ಜಿ. ಶಿವಣ್ಣ ಮುಂದೆಬಂದಿದ್ದಾರೆ.

ಈ ಸಲ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಸಿರಿಧಾನ್ಯ ಲೇಖನ ಪ್ರಶಸ್ತಿಗೆ ಸೂಕ್ತ ಪ್ರವೇಶಗಳು ಬಂದಿಲ್ಲವಾದ್ದರಿಂದ ಈ ಎರಡೂ ಪ್ರಶಸ್ತಿಗಳನ್ನು ನೀಡುತ್ತಿಲ್ಲ.

ಕಾಮ್ ಪುಸ್ತಕಗಳನ್ನು ಖರೀದಿಸುವಂತೆ ನಾವು ಮಾಡಿದ್ದ ವಿನಂತಿಗೆ ಕಾಮ್ ಫೆಲೋ ಪ್ರಕಾಶ್ ಭಟ್ ಕರ್ಕಿ ತಕ್ಷಣವೆ ಸ್ಪಂದಿಸಿದ್ದಾರೆ. ಕೇಂದ್ರ ಪ್ರಕಟಿಸಿರುವ ಪುಸ್ತಕಗಳ ಪ್ರತಿಗಳನ್ನು ಉಡುಗೊರೆ-ಬಹುಮಾನ ನೀಡುವ ಸಲುವಾಗಿ ಕೊಂಡಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು. ಇತರ ಕಾಮ್ ಫೆಲೋಗಳು ಹಾಗೂ ಹಿತೈಷಿಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಬೇಕಾಗಿ ಮತ್ತೊಮ್ಮೆ ಕೋರಿಕೆ.

ಕೇಂದ್ರದ ೧೨ನೇ ವಾರ್ಷಿಕೋತ್ಸವ ಕಳೆದ ವರ್ಷದ ವೇದಿಕೆಯಲ್ಲೇ ಸರಳವಾಗಿ ನಡೆಯಲಿದೆ. ಧಾರವಾಡ ಸಮೀಪದ ‘ಸುಮನ ಸಂಗಮ’ ಕಾಡುತೋಟದಲ್ಲಿ ಆತ್ಮದೀಪ - ಆರೋಗ್ಯ ಮತ್ತು ಪರಿಸರ ಸಂಘಟನೆ ಹಾಗೂ ಕರ್ನಾಟಕ ಶಿಕ್ಷಣ ಜಾಲದ ಸಹಯೋಗದಲ್ಲಿ ಅಕ್ಟೋಬರ್ ೨೮ರಂದು ಮಧ್ಯಾಹ್ನ3.30ಕ್ಕೆ ಕಾರ್ಯಕ್ರಮ. ಆ ಸಂದರ್ಭದಲ್ಲಿ ಕಾಮ್ ಫೆಲೋ ಪ್ರಮಾಣ ಪತ್ರ ವಿತರಣೆ ಹಾಗೂ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಕಾಮ್ ಅಭ್ಯರ್ಥಿಗಳು ಹಾಗೂ ಫೆಲೋಗಳ ಉತ್ತಮ ಲೇಖನಗಳಿಗೆ ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತ.


 
ಇದುವರೆಗಿನ ಕಾಮ್ ಫೆಲೋಗಳು ಕೃಷಿ ಮಾಧ್ಯಮ ಕೇಂದ್ರದ ವಾರ್ಷಿಕೋತ್ಸವಗಳು
 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media