+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಬರಸಹಿಷ್ಣು ಹಾರಕಕ್ಕೆ ಮರುಜೀವ: ಗೋಪಾಲನಹಳ್ಳಿಯ ಯಶೋಗಾಥೆ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲನಹಳ್ಳಿ 25 ವರ್ಷಗಳ ಹಿಂದೆ ಸಿರಿಧಾನ್ಯ ಹಾರಕಕ್ಕೆ ಹೆಸರುವಾಸಿಯಾಗಿದ್ದ ಗ್ರಾಮ. ಆದರೆ ಕಾಲಾಂತರದಲ್ಲಿ ಅದು ನೇಪಥ್ಯಕ್ಕೆ ಸರಿಯಿತು. ಇದೀಗ ಅಲ್ಲಿ ಹಾರಕಕ್ಕೆ ಮರುಜೀವ ಪ್ರಾಪ್ತವಾಗಿದೆ. ಈ ವರ್ಷ ಗ್ರಾಮದಲ್ಲಿ ಸುಮಾರು 26 ಕ್ವಿಂಟಾಲ್ ಹಾರಕ ಬೆಳೆಯಲಾಗಿದ್ದು ‘ಹಾರಕ ಬೆಳೆಗಾರರ ಸಂಘ’ ಸ್ಥಾಪನೆಯಾಗಿದೆ. ಮುಂದಿನ ವರ್ಷ 100 ಕ್ವಿಂಟಾಲ್ ಹಾರಕ ಬೆಳೆಯುವ ಹಂಬಲ ಗ್ರಾಮಸ್ಥರಲ್ಲಿದೆ.

ಅತ್ಯಂತ ಕಡಿಮೆ ಮಳೆಯಲ್ಲಿ ಬೆಳೆಯುವ, ಕೀಟ-ರೋಗಗಳ ಬಾಧೆಯಿಲ್ಲದ, ತಮ್ಮೊಡನೆ ಹತ್ತಾರು ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡುವ ಸಿರಿಧಾನ್ಯಗಳು (ಸಜ್ಜೆ, ರಾಗಿ, ನವಣೆ, ಸಾವಿ, ಹಾರಕ, ಊದಲು, ಬರಗ ಇತ್ಯಾದಿ) ಭೂಮಿಯ ಫಲವತ್ತತೆ ತೀರ ಕಡಿಮೆಯಿದ್ದರೂ ಉತ್ತಮ ಫಸಲು ನೀಡಬಲ್ಲವು. ಹವಾಮಾನದ ಏರುಪೇರುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಇವುಗಳಿಗೆ ರಾಸಾಯನಿಕದ ಸೋಂಕಿಲ್ಲವಾದ್ದರಿಂದ ಬಹುಕಾಲ ಶೇಖರಿಸಿಡಬಹುದು. ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ. ಆರೋಗ್ಯಕ್ಕೆ ಪೂರಕ. ಆಹಾರ ಭದ್ರತೆಗೆ ಗಟ್ಟಿ ಬುನಾದಿ. ಗೋಪಾಲನಹಳ್ಳಿಯ ಉತ್ಸಾಹಿ ಯುವಕರು ಇದೀಗ ಮರೆತುಹೋದ ಹಾದಿಯಲ್ಲಿ ಮತ್ತೆ ಹೆಜ್ಜೆಹಾಕುತ್ತಿದ್ದಾರೆ. ಇದಕ್ಕೆ ಹಿರಿಯ ಬೆಂಬಲವೂ ದೊರೆತಿದೆ. ಈಗಿನ ಕೃಷಿ ಸಂದರ್ಭದಲ್ಲಿ ಇದು ತುಂಬ ಅರ್ಥಪೂರ್ಣ ಕೆಲಸ.

ಗ್ರಾಮೀಣ ಬದುಕು ಆತಂಕದಲ್ಲಿದೆ ಎಂಬ ಕಳವಳದ ಈ ದಿನಗಳಲ್ಲಿ ಗೋಪಾಲನಹಳ್ಳಿಯ ಮಾದರಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಈ ಯಶೋಗಾಥೆಯನ್ನು ಅಭಿವೃದ್ಧಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಈ ಕೃತಿಯಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. ಹಾರಕ ಬೆಳೆಯುವ ವಿಧಾನ, ಸಂಸ್ಕರಣೆ ಕ್ರಮ ಹಾಗೂ ಬಳಕೆಯ ಬಗ್ಗೆ ವಿವರಗಳಿವೆ. ಇದು ಕೃಷಿ ಮಾಧ್ಯಮ ಕೇಂದ್ರದ 17ನೇ ಕೃತಿ. ಬೆಲೆ: ರೂ.25. ಪ್ರತಿಗಳಿಗೆ: ಕೃಷಿ ಮಾಧ್ಯಮ ಕೇಂದ್ರ, ನಂ.327, ಮೊದಲನೇ ಮಹಡಿ, ರಾಯಚೂರು ಪ್ಲಾಟ್ಸ್, ನಾರಾಯಣಪುರ, ಧಾರವಾಡ - 580 008


 
ಪುಸ್ತಕ ಡೌನ್‌ಲೋಡ್ ಮಾಡಿ
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media