+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಿ ಗ್ರಾಮದ ಯಲ್ಲಪ್ಪ-ಯಲ್ಲವ್ವ ದಂಪತಿ ಕೃಷಿ ಮಾಡಲು ಮೂಲಧನ ಹೊಂದಿಸಲು ಊರು ಬಿಟ್ಟವರು. ದಶಕಗಳ ಕಾಲ ಗೋವಾ, ಮಂಗಳೂರು ಎಂದು ಊರೂರು ಸುತ್ತಿ, ಶ್ರಮವಹಿಸಿ ದುಡಿದು ತಮ್ಮ ಕನಸಿನ ಕೃಷಿ ಮಾಡಲು ಅಗತ್ಯ ಹಣ ಹೊಂದಿಸಿದರು. ತಮ್ಮ ಸುತ್ತಲ ರೈತರಂತೆ ಬೋರ್ ಕೊರೆಸಿ ವಾಣಿಜ್ಯ ಬೆಳೆ ಬೆಳೆಯುವ ಉದ್ದೇಶವಿದ್ದರೂ ವಿವಿಧ ಕಾರಣಗಳಿಂದ ಅದು ಕೈಗೂಡಲಿಲ್ಲ. ಈ ಸಮಸ್ಯೆ ಮುಂದೆ ಹೊಸ ಸಾಧನೆಗೆ ಅಡಿಪಾಯ ಹಾಕಿತು. ಕೃಷಿಗೆ ಪೂರಕವೆಂದು ಆರಿಸಿಕೊಂಡ ಹೈನುಗಾರಿಕೆಯಲ್ಲಿ ಕೈ ಪಳಗಿತು. ಸ್ವತಃ ಪಶು ಆಹಾರ ತಯಾರಿ, ಹೈನುಗಳ ಆರೋಗ್ಯದ ಕಾಳಜಿ, ಸ್ವಚ್ಛತೆ, ಉತ್ತಮ ನಿರ್ವಹಣೆ ಮುಂತಾದ ಕಾರಣಗಳಿಂದ ಇವರ ಹೈನುಗಾರಿಕೆ ಇಂದು ಊರಿಗೇ ಮಾದರಿ ಎನಿಸಿದೆ. ಎರಡೂವರೆ ಎಕರೆ ಪಿತ್ರಾರ್ಜಿತ ಜಮೀನಿಗೆ ಮತ್ತೆ ಹದಿನೈದು ಎಕರೆ ಸೇರಿಸಿರುವ ಈ ದಂಪತಿ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ.

ವೃತ್ತಿಪರತೆ, ಶಿಸ್ತಿನ ಬದುಕು, ಮನೆಯವರೆಲ್ಲ ಕೂಡಿ ಮಾಡುವ ದುಡಿಮೆ, ಮಿತ ಖರ್ಚು-ವೆಚ್ಚ, ಉಳಿತಾಯಕ್ಕೆ ಒತ್ತು, ಸಹಕಾರಿ ಮನೋಭಾವ, ಜೀವನದಲ್ಲಿ ಸಂತೃಪ್ತಿ, ಊರವರೊಂದಿಗೆ ಉತ್ತಮ ಬಾಂಧವ್ಯ ಮುಂತಾದ ಮಣಿಗಳನ್ನು ಯಲ್ಲವ್ವ-ಯಲ್ಲಪ್ಪ ತಮ್ಮ ಬದುಕಿನ ಸರದಲ್ಲಿ ಪೋಣಿಸಿದ್ದಾರೆ. ಹಾಗಾಗಿ ಅವರಿಗೆ ಒಕ್ಕಲುತನ ಸಹನೀಯವಾಗಿದೆ. ಸಂತಸಮಯವಾಗಿದೆ.

ಈ ದಂಪತಿಯ ಕೃಷಿಗಾಥೆಯನ್ನು ಶಿಕ್ಷಕ,ಬರಹಗಾರ ಕಿಶನ್ ರಾವ್ ಕುಲಕರ್ಣಿ ದಾಖಲಿಸಿದ್ದಾರೆ. ಸಣ್ಣ ರೈತರ ದೊಡ್ಡ ಸಾಧನೆಯನ್ನು ದಾಖಲಿಸುವ ಕೇಂದ್ರದ ಪ್ರಯತ್ನದಲ್ಲಿ ಇದು ಏಳನೇ ಪುಸ್ತಕ.


 
ಪುಸ್ತಕ ಡೌನ್‌ಲೋಡ್ ಮಾಡಿ
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media