Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ
ಸಕಲೇಶಪುರ ತಾಲೂಕಿನ ಕೊಂತನಮನೆಯಲ್ಲಿ ಕಳೆದ ಒಂದೂವರೆ ದಶಕದಿಂದ ತಮ್ಮ ನಾಲ್ಕೂವರೆ ಎಕರೆ ಜಮೀನಿನಲ್ಲಿ ಪರಿಸರಸ್ನೇಹಿ ಒಕ್ಕಲುತನ ಮಾಡುತ್ತಿರುವ ಕರೇಗೌಡ-ಯಶೋದ ದಂಪತಿ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡವರು. ಆಹಾರ ಭದ್ರತೆಗೆ ಭತ್ತ-ತರಕಾರಿಗಳು, ಆರ್ಥಿಕ ಮುನ್ನಡೆಗೆ ಕಾಫಿ-ಏಲಕ್ಕಿ ವಾಣಿಜ್ಯ ಬೆಳೆಗಳು, ಇವುಗಳ ನಡುವೆ ಸ್ವಂತ ದುಡಿಮೆ ಇವರ ವ್ಯವಸಾಯ ಬದುಕನ್ನು ನೆಮ್ಮದಿಯ ಹಾದಿಯಲ್ಲಿ ಮುನ್ನಡೆಸುತ್ತಿವೆ. ಇವರು ಸಾಲ-ಸಬ್ಸಿಡಿ ನೆಚ್ಚಿಕೊಂಡವರಲ್ಲ. `ನಮ್ಮದು ಅಡ್ಡಾದಿಡ್ಡಿ ಕೃಷಿ' ಎನ್ನುವ ಕರೇಗೌಡರು `ದುಡಿಯಲು ಶಕ್ತಿ ಇರುವವರೆಗೆ ನಾವು ಎಂದಿಗೂ ಬಡವರಲ್ಲ. ಆದರೆ ಖರ್ಚುಗಳಿಗೆ ಕಡಿವಾಣ ಇರಬೇಕು. ಸಾಲಕ್ಕೆ ಎರವಾಗಬಾರದು. ಆಹಾರ ಭದ್ರತೆಯನ್ನೂ ನೋಡಿಕೊಳ್ಳಬೇಕು' ಎನ್ನುತ್ತಾರೆ. ವ್ಯವಸಾಯ-ಮನೆಯ ಕೆಲಸ ಎರಡರಲ್ಲೂ ಪತಿ-ಪತ್ನಿ ಸಮಭಾಗಿಗಳು.

ಕೃಷಿ ಮಾಧ್ಯಮ ಕೇಂದ್ರ ನಡೆಸುವ ಒಂದು ವರ್ಷ ಅವಧಿಯ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ ಪೂರೈಸಿ ಕಾಮ್ ಫೆಲೋ ಆಗಿರುವ ಹಾಸನ ಜಿಲ್ಲೆ ಕಾನಹಳ್ಳಿಯ ಪೂರ್ಣಿಮಾ ತೀರ್ಥಮಲ್ಲೇಶ್ ಅವರ ಮೊದಲ ಕೃತಿ ಇದು. ರಾಸಾಯನಿಕರಹಿತ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿಯುವ ಕೇಂದ್ರದ ಪ್ರಯತ್ನದಲ್ಲಿ ಐದನೇ ಪುಸ್ತಕ. ಈ ಮೊದಲು ಪ್ರಕಟಿಸಿರುವ `ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ', `ಗುಡ್ದದ ಮೇಲಿನ ಏಕವ್ಯಕ್ತಿ ಸೈನ್ಯ', `ಸಾವಯವದ ಹಾದಿ' ಹಾಗೂ `ಮಿಶ್ರಕೃಷಿಮೌಲ್ಯವರ್ಧನೆ-ನೇರ ಮಾರುಕಟ್ಟೆ: ಎಸ್.ಎಂ. ಪಾಟೀಲರ ಮಾದರಿ' ಪುಸ್ತಕಗಳಿಗೆ ಕಂಡುಬಂದ ಉತ್ತಮ ಪ್ರತಿಕ್ರಿಯೆ ಈ ಸರಣಿಯನ್ನು ಮುಂದುವರಿಸಲು ಪ್ರೇರಣೆ ನೀಡಿದೆ.

ಪುಸ್ತಕದ ಬೆಲೆ: 20 ರೂಪಾಯಿ. ಅಂಚೆ ವೆಚ್ಚ ಪ್ರತ್ಯೇಕ.

ವಿವರಗಳಿಗೆ ಕೇಂದ್ರವನ್ನು ಸಂಪರ್ಕಿಸಿ.

 
ಪುಸ್ತಕ ಡೌನ್‌ಲೋಡ್ ಮಾಡಿ cam book 12
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media