+
Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಭತ್ತ ಸಂರಕ್ಷಣೆಯ ಹಾದಿಯಲ್ಲಿ ಆಹಾರ ಸ್ವಾವಲಂಬನೆ

'ಜಗತ್ತು ಮೂರು ದೊಡ್ಡ ಆತಂಕಗಳನ್ನು ಎದುರಿಸುತ್ತಿದೆ. ಭೂಮಿ ಬಿಸಿ ಆಗುತ್ತಿದೆ. ಅದಕ್ಕೆ ಮಾನವನೇ ಕಾರಣ. ಆದರೆ ಇದರಿಂದ ಹೆಚ್ಚು ತೊಂದರೆಗೀಡಾಗುತ್ತಿರುವವರು ರೈತರು. ಹವಾಮಾನ ವೈಪರೀತ್ಯವನ್ನು ಎದುರಿಸಿ ಬೆಳೆ ಬೆಳೆಯುವುದು ಸುಲಭದ ಮಾತಲ್ಲ. ಜಾಗತೀಕರಣದಿಂದಾಗಿ ಮಂಡ್ಯದ ಭತ್ತ ಬೆಳೆಗಾರ ಫಿಲಿಪ್ಪೈನ್ಸ್‌ನ ಕೃಷಿಕನೊಂದಿಗೆ ಪೈಪೋಟಿಗಿಳಿಯಬೇಕಾಗಿದೆ. ನಮ್ಮ ದೇಶದಲ್ಲಿ ಕೃಷಿಕರು ಬೀಜ ಸ್ವಾತಂತ್ರ್ಯ, ನೀರಿನ ಸ್ವಾತಂತ್ರ್ಯ, ಸಾರಿಗೆ ಸ್ವಾತಂತ್ರ್ಯವನ್ನು ಪೂರ್ಣವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಇದರಿಂದ ರೈತರ ಸ್ವಾಭಿಮಾನ, ಸ್ವಾಲಂಬನೆ ಎರಡಕ್ಕೂ ಪೆಟ್ಟು ಬಿದ್ದಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ದಿನ 2000 ಕುಟುಂಬಗಳು ಗ್ರಾಮೀಣ ಭಾಗದಿಂದ ಪಟ್ಟಣಗಳಿಗೆ ವಲಸೆ ಹೋಗುತ್ತಿವೆ. ಅರ್ಧ ಗಂತೆಗೆ ಒಬ್ಬ ಕೃಷಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.’ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೇಳಿದರು. ಕೃಷಿ ಮಾಧ್ಯಮ ಕೇಂದ್ರದ '700 ಭತ್ತ, 120 ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಪುಸ್ತಕವನ್ನು ಪರಿಚಯಿಸಿದ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು, 'ಐತಿಹಾಸಿಕ ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್ ದೇಸಿ ಭತ್ತ ಸಂಗ್ರಾಹಕರಾಗಿ ದೊಡ್ಡ ಎತ್ತರವನ್ನು ತಲುಪಿದ್ದಾರೆ. ಇತರ ರೈತರಿಗೂ ಈ ಹಾದಿಯಲ್ಲಿ ಮುನ್ನಡೆಯಲು ಪ್ರೇರೇಪಿಸಿದ್ದಾರೆ. ಕುಟುಂಬದ ಆಹಾರ ಭದ್ರತೆಯನ್ನೂ ಸಾಕಾರಗೊಳಿಸಿದ ಘನಿ ಅವರ ಸಾಧನೆ ಅಪರೂಪದ್ದು. ಹಳ್ಳಿಯ ಯುವಪೀಳಿಗೆ ಪಟ್ಟಣದತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಪದವೀಧರ ಯುವಕರೊಬ್ಬರು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ. ಮಾಧ್ಯಮ ರೈತರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಮಾಧ್ಯಮ ಸಮಸ್ಯೆಯ ಭಾಗವಾಗದೆ ಪರಿಹಾರದ ಭಾಗವಾದರೆ ಅದು ಇಡೀ ರೈತ ಸಮುದಾಯಕ್ಕೆ ಹಿತ. ಹತಾಶ ಸನ್ನಿವೇಶದಲ್ಲೂ ರೈತರಲ್ಲಿ ಭರವಸೆ ನೀಡಬಲ್ಲ ಅನೇಕ ಯಶೋಗಾಥೆಗಳು ರಾಜ್ಯದ ಅಲ್ಲಲ್ಲಿ ಕಂಡುಬರುತ್ತಿವೆ. ರಾಜ್ಯದ ವಿವಿಧೆಡೆ ವಿಷಮುಕ್ತ ಒಕ್ಕಲುತನ ಮಾಡುತ್ತ, ಹೊಸ ಪ್ರಯೋಗಗಳಲ್ಲಿ ತೊಡಗಿ ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು ಕೇಂದ್ರದ ಉದ್ದೇಶ.’ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ನಡೆದ ಸಂಸ್ಕೃತಿ ಹಬ್ಬದಲ್ಲಿ ಮಾರ್ಚ್ 31, 2014ರಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ '700 ಭತ್ತ, 120 ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್’ ಪುಸ್ತಕದೊಂದಿಗೆ ಹಿರಿಯ ಕೃಷಿಕ ಎ.ಪಿ. ಚಂದ್ರಶೇಖರ್ ಅವರು ಬರೆದ 'ಅನ್ನದಾತನ ಆತ್ಮಹತ್ಯೆ’ ಪುಸ್ತಕ ಬಿಡುಗಡೆಯಾಯಿತು.



ಇದು ಕೃಷಿ ಮಾಧ್ಯಮ ಕೇಂದ್ರದ 19ನೇ ಕೃತಿ. ಬೆಲೆ: ರೂ.30. ಪ್ರತಿಗಳಿಗೆ: ಕೃಷಿ ಮಾಧ್ಯಮ ಕೇಂದ್ರ, ನಂ.327, ಮೊದಲನೇ ಮಹಡಿ, ರಾಯಚೂರು ಪ್ಲಾಟ್ಸ್, ನಾರಾಯಣಪುರ, ಧಾರವಾಡ - 580 008


 
ಪುಸ್ತಕದ ಕುರಿತು
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media