Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಬರವಣಿಗೆಯ ಹೊಸ ಹಾದಿ

ಓದುವುದು ಚಿಕ್ಕಂದಿನಿಂದಲೂ ನನ್ನ ಅತ್ಯಂತ ಪ್ರಿಯ ಹವ್ಯಾಸ. ಮೊದಲೆಲ್ಲ ಆಗೊಮ್ಮೆ ಈಗೊಮ್ಮೆ ಎಂಬಂತೆ ತೀರ ವಿರಳವಾಗಿ ಲೇಖನಗಳನ್ನು ಬರೆಯುತ್ತಿದ್ದೆ. ಕಾಮ್ ತರಬೇತಿಯ ಈ ಅವಧಿಯಲ್ಲಿ ತಿಂಗಳಿಗೊಮ್ಮೆ ಅಸೈನ್‌ಮೆಂಟ್ ಕಳಿಸಬೇಕಾದ ಅನಿವಾರ್ಯತೆ. ಹೀಗಾಗಿ ಬರವಣಿಗೆಯನ್ನು ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ಳಲು ಸಾಧ್ಯವಾಯಿತು.

ಪ್ರಾಥಮಿಕ ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಪಡೆದ ನಂತರ ಮುಂದಿದ್ದ ಪ್ರಶ್ನೆ ‘ವಿಷಯದ ಆಯ್ಕೆ ಹೇಗೆ’ ಎಂಬುದು. ಆದರೆ ನನಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡಲಿಲ್ಲ. ಒಬ್ಬ ವೃತ್ತಿಪರ ಪಶುವೈದ್ಯನಾಗಿ ಸುಮಾರು ಹತ್ತು ಗಂಟೆಗಳಷ್ಟು ಕಾಲ ಗ್ರಾಮೀಣ ಪ್ರದೇಶದಲ್ಲಿ ಜನರ ಮತ್ತು ಜಾನುವಾರುಗಳ ಒಡನಾಟದಲ್ಲಿರುವುದು ದೈನಂದಿನ ವಿದ್ಯಮಾನ. ಇದರಿಂದ ನನ್ನ ವೃತ್ತಿಯ ಕುರಿತಾಗಿಯೇ ಅನೇಕಾನೇಕ ವಿಷಯಗಳು ಬರವಣಿಗೆಗೆ ಸಿಗುತ್ತಿರುತ್ತವೆ.

ಇಂತಹ ವಿಷಯಗಳಲ್ಲಿ ಎರಡು ಪ್ರಕಾರಗಳನ್ನು ನಾನು ಗುರುತಿಸಿಕೊಂಡಿದ್ದೇನೆ. ಮೊದಲನೆಯದು ರೈತರಿಗೆ ತಿಳುವಳಿಕೆ ನೀಡುವಂತಹ ವಿಷಯಗಳು. ಉದಾಹರಣೆಗೆ ‘ಹಸಿರು ಮೇವಿನ ಕುರಿತಾಗಿ, ಕೆಚ್ಚಲು ಬಾವಿನ ಬಗ್ಗೆ, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಹೇಗೆ’ ಈ ಥರದವು. ಎರಡನೆಯದೆಂದರೆ ಒಂದು ವಿಷಯದ ಬಗ್ಗೆ ಏನಾದರೂ ಹೊಸತನ್ನು ಕಂಡುಕೊಂಡು ಯಶಸ್ವಿಯಾದ ಅಥವಾ ವಿಫಲವಾದ ಕುರಿತು ಬರೆಯುವುದು. ‘ಹಸಿರು ಮೇವು ಇದೆಯೇ ಎಂದು ಖಾತರಿಪಡಿಸಿಕೊಂಡೇ ಹಸು ಖರೀದಿಸಲು ಸಾಲ ನೀಡಿ’ ಎಂಬಂತಹ ವಿಷಯಗಳು.

ಬರವಣಿಗೆಯ ಹಾದಿಯಲ್ಲಿ ಮುಕ್ತ ಮನಸ್ಸಿನಿಂದ ಸಲಹೆ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಒತ್ತಾಸೆಯಿಂದ ನನ್ನ ವೃತ್ತಿ ಸಂಬಂಧಿ ವಿಷಯದಿಂದ ಹೊರಬಂದು ಕೂಡ ಬರೆಂiಲು ಸಾಧ್ಯವಾಯಿತು. ಹೈನುಗಾರಿಕೆಗೆ ಸಂಬಂಧಿಸಿದ ಲೇಖನಕ್ಕಾದರೆ ಹುಡುಕಿಕೊಂಡು ಎಲ್ಲಿಯೂ ಹೊರಹೋಗಬೇಕಾದ ಅವಶ್ಯಕತೆ ಬಹುತೇಕ ಇಲ್ಲ. ಪ್ರತಿನಿತ್ಯ ಚಿಕಿತ್ಸೆಗಾಗಿ ಹಳ್ಳಿಗಳನ್ನು ಸುತ್ತುವುದರಲ್ಲೇ ಲೇಖನಕ್ಕೆ ವಿಷಯ ಸಿಕ್ಕಿಬಿಡುತ್ತದೆ. ಆದರೆ ಇದರ ಹೊರತಾಗಿ ಬರೆಯುವಾಗ ಮಾತ್ರ ಪ್ರತ್ಯೇಕ ಕ್ಷೇತ್ರಭೇಟಿಯ ಮೂಲಕ ಪ್ರತ್ಯಕ್ಷ ಅನುಭವ ಪಡೆಯುವ ಅಗತ್ಯ ಬಂತು. ‘ತರಕಾರಿಯಿಂದಲೇ ಬದುಕು’, ‘ಫಲಗಳ ಮೌಲ್ಯವರ್ಧನೆ ಇಂದಿನ ಅವಶ್ಯಕತೆ’ - ಇವು ಹೀಗೆ ಬರೆದ ಲೇಖನಗಳು.

ಬರವಣಿಗೆಯಲ್ಲಿ ನಾನು ಅನುಸರಿಸುತ್ತಿರುವ ವಿಧಾನವೆಂದರೆ ವಿಷಯವನ್ನು ಮನದಲ್ಲೇ ನಿರ್ಧರಿಸಿಕೊಂಡು ಅದರ ಕುರಿತು ನಾಲ್ಕಾರು ದಿನ ಯೋಚಿಸುವುದು. ಅಗತ್ಯವಾದ ಪೂರಕ ಮಾಹಿತಿಗಳನ್ನೆಲ್ಲ ಸಂಗ್ರಹಿಸಿಕೊಳ್ಳುವುದು. ನಂತರ ಅವುಗಳನ್ನು ಎದುರಿಗಿಟ್ಟುಕೊಂಡು ಒಂದೇ ಟೇಕ್‌ನಲ್ಲಿ ಬರೆದು ಮುಗಿಸುವುದು. ಕಾಗುಣಿತ ದೋಷಗಳು ಇರದಂತೆ ನೋಡಿಕೊಳ್ಳುವುದು ಪರಿಷ್ಕರಣೆ ಮಾಡುವಾಗಿನ ಮುಖ್ಯ ಆದ್ಯತೆಗಳಲ್ಲೊಂದು. ನಂತರ ಎರಡು ಮೂರು ದಿನಗಳ ಕಾಲ ಹಾಗೇ ಬಿಡುತ್ತೇನೆ. ಕೊನೆಗೊಂದು ದಿನ ಕುಳಿತು ಲೇಖನಕ್ಕೆಫೈನಲ್ ಟಚ್ ನೀಡಿ ಮೊದಲೇ ಸಂಗ್ರಹಿಸಿಕೊಂಡ ಫೊಟೊಗಳನ್ನು ಅಟ್ಯಾಚ್ ಮಾಡಿ ಅಸೈನ್‌ಮೆಂಟ್ ಪೋಸ್ಟ್ ಮಾಡುವುದು ನಾನು ಅನುಸರಿಸುತ್ತಿರುವ ಪದ್ಧತಿ. ತಿಂಗಳ ಅಸೈನ್‌ಮೆಂಟ್ ಸರಿಯಾದ ಸಮಯಕ್ಕೆ ತಲುಪಬೇಕೆಂಬ ಉದ್ದೇಶದಿಂದ ಮುಂದಿನ ಲೇಖನದ ಸಿದ್ಧತೆಯನ್ನು ತಿಂಗಳ ಮೊದಲ ವಾರದಲ್ಲೇ ಪ್ರಾರಂಭಿಸುತ್ತಿದ್ದೆ.

ಕಾಮ್ ಮಾರ್ಗದರ್ಶನವು ಕಡಿಮೆ ಶಬ್ದಗಳಲ್ಲಿ ಹೆಚ್ಚು ವಿಷಯಗಳ ಸಂವಹನ, ವಿಷಯ ಸಂಗ್ರಹಣೆಯ ಪರಿ, ಸಮಚಿತ್ತದ ಬರವಣಿಗೆ, ಒಂದೇ ವಿಷಯದ ವಿವಿಧ ಮಗ್ಗುಲುಗಳನ್ನು ವಿಶ್ಲೇಷಿಸುವುದು, ಲೇಖನವಾಗಬಲ್ಲ ವಿಷಯಗಳ ಸುಳಿವುಗಳನ್ನು ಕಂಡುಕೊಳ್ಳುವ ಕುರಿತಾಗಿ ಅರಿಯಲು ಸಹಾಯಕವಾಯಿತು. ಒಟ್ಟಾರೆಯಾಗಿ ತರಬೇತಿಗೂ ಮುನ್ನ ‘ಕಾಮ್’ದಿಂದ ನಾನು ಏನೆಲ್ಲ ಎದುರುನೋಡಿದ್ದೆನೋ ಅದಕ್ಕಿಂತ ಹೆಚ್ಚು ವಿಷಯಗಳನ್ನು ತಿಳಿದುಕೊಂಡೆ ಎಂದು ನಿಶ್ಚಿತವಾಗಿ ಹೇಳಬಲ್ಲೆ.


- ಡಾ. ಗಣೇಶ ಎಂ. ಹೆಗಡೆ

 

 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media