Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಕೃಷಿಪರ_ಮಾಧ್ಯಮ
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ದೇಣಿಗೆ
  ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ

ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೃಷಿ ಮಾಧ್ಯಮ ಕೇಂದ್ರ 2001ರಿಂದ ಪ್ರತಿ ವರ್ಷ ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತಿದೆ. ಕೃಷಿಕರ ಅಗತ್ಯಗಳನ್ನಾಧರಿಸಿದ, ಅವರ ನೋವು-ನಲಿವುಗಳ ಮೇಲೆ ಬೆಳಕು ಚೆಲ್ಲುವ, ಅವರ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ವಸ್ತುನಿಷ್ಠ ಹಾಗೂ ವಿಚಾರಪೂರ್ಣ ಬರಹಗಳು ಕೃಷಿಪತ್ರಿಕೋದ್ಯಮವನ್ನು ಸದೃಢಗೊಳಿಸಬೇಕೆಂಬ ಆಶಯದೊಂದಿಗೆ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

ಮೊದಲ ಎಂಟು ವರ್ಷ ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿತ್ತು. ಮೊದಲನೆಯದ್ದು ಕೃಷಿಕರೇ ಬರೆದ ಲೇಖನಗಳು ಹಾಗೂ ಎರಡನೆಯದ್ದು ಮುಕ್ತ ವಿಭಾಗ. 2009ರಿಂದ ಇವೆರಡೂ ವಿಭಾಗಗಳನ್ನು ಸೇರಿಸಿ ಒಂದೇ ಪ್ರಶಸ್ತಿ ನೀಡುತ್ತಿದ್ದೇವೆ. ಇದು ಎರಡು ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ಖ್ಯಾತ ಕಲಾವಿದ ಎಂ.ಎಸ್. ಮೂರ್ತಿ ಅವರು ರಚಿಸಿರುವ ಪರಿಸರ ಶಿಲ್ಪವನ್ನು ಒಳಗೊಂಡಿದೆ. 2010ರಲ್ಲಿ ಪ್ರಶಸ್ತಿಗೆ ಯಾವ ಲೇಖನವೂ ಆಯ್ಕೆಯಾಗಿಲ್ಲ. 2011ನೇ ಸಾಲಿನ ಪ್ರಶಸ್ತಿಯನ್ನು ರಾಮನಗರದ ಜಿ. ಗಣಪತಿ ಭಟ್ ಹಾಗೂ ಬೆಳಗಾವಿಯ ಲೀಲಾ ಕೌಜಗೇರಿ ಹಂಚಿಕೊಂಡಿದ್ದಾರೆ.

ಇದುವರೆಗಿನ ಪ್ರಶಸ್ತಿ ವಿಜೇತರು ಹಾಗೂ ಪ್ರಶಸ್ತಿಯ ಪ್ರಾಯೋಜಕರ ವಿವರ ಇಲ್ಲಿದೆ:
  ಜಿ. ಗಣಪತಿ ಭಟ್   2011
  ಲೀಲಾ ನಾ. ಕೌಜಗೇರಿ   2011
  ನಾಗೇಂದ್ರ ಸಾಗರ್   2009
  ಈರಯ್ಯ ಕಿಲ್ಲೇದಾರ ಕೃಷಿಕರ ವಿಭಾಗ 2008
  ಕಿಶನ್ ರಾವ್ ಕುಷ್ಟಗಿ ಮುಕ್ತ ವಿಭಾಗ 2008
  ಬಾಲಚಂದ್ರ ಹೆಗಡೆ ಕೃಷಿಕರ ವಿಭಾಗ 2007
  ರವಿಶಂಕರ ದೊಡ್ಡಮಾಣಿ ಮುಕ್ತ ವಿಭಾಗ 2007
  ಗಿರೀಶ್ ಹೆಚ್.ಸಿ ಮುಕ್ತ ವಿಭಾಗ 2007
  ಗಾಣಧಾಳು ಶ್ರೀಕಂಠ ಮುಕ್ತ ವಿಭಾಗ 2006
  ಬೆಂಗಳಿ ವೆಂಕಟೇಶ ಕೃಷಿಕರ ವಿಭಾಗ 2006
  ಸುಬ್ರಹ್ಮಣ್ಯ ಎಮ್. ಹೆಗಡೆ ಕೃಷಿಕರ ವಿಭಾಗ 2005
  ವಿ.ಗಾಯತ್ರಿ ಮುಕ್ತ ವಿಭಾಗ 2005
  ಬಿ.ಎನ್.ನಂದೀಶ್ ಕೃಷಿಕರ ವಿಭಾಗ 2004
  ಮಲ್ಲಿಕಾರ್ಜುನ ಹೊಸಪಾಳ್ಯ ಮುಕ್ತ ವಿಭಾಗ 2004
  ಡಿ.ಡಿ.ಭರಮಗೌಡ್ರ ಕೃಷಿಕರ ವಿಭಾಗ 2003
  ನಾ.ಕಾರಂತ ಪೆರಾಜೆ ಮುಕ್ತ ವಿಭಾಗ 2003
  ಡಾ.ಕರುಣಾಕರ ವಿ.ಎನ್. ಮುಕ್ತ ವಿಭಾಗ 2003
  ಪಡಾರು ರಾಮಕೃಷ್ಣ ಶಾಸ್ತ್ರಿ ಕೃಷಿಕರ ವಿಭಾಗ 2002
  ಜಿ.ಕೃಷ್ಣಪ್ರಸಾದ್ ಮುಕ್ತ ವಿಭಾಗ 2002
  ಚಂದ್ರಶೇಖರ ಏತಡ್ಕ ಕೃಷಿಕರ ವಿಭಾಗ 2001
  ಆರ್.ಎಸ್. ಪಾಟೀಲ್ ಮುಕ್ತ ವಿಭಾಗ 2001
 
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media